Wednesday, October 04, 2006

ಪ್ರಜಾವಾಣಿ v/s ವಿಜಯ ಕರ್ನಾಟಕ

ಇದು ನಾನು ನನ್ನ ಅಮ್ಮನ ಜೊತೆ ಸದಾ ನಡೆಯುವ ವಾಗ್ವಾದದ ವಿಷಯ !!
ನಾನು ಪ್ರಜಾವಾಣಿಯ ಕಡೆ, ನನ್ನ ಅಮ್ಮ ವಿಜಯ ಕರ್ನಾಟಕದ ಕಡೆ !!!

ನನಗೂ ಪ್ರಜಾವಾಣಿಗೂ ಅದೇನೋ ನಂಟು. ಯಾವ ತರಹದ ನಂಟು, ಸರಿಯಾಗಿ ಗೊತ್ತಿಲ್ಲ....

ಬಾಲ್ಯದಿಂದಲೂ ಪ್ರತಿದಿನ ಪ್ರಜಾವಾಣಿ ಓದುವ ಅಭ್ಯಾಸ. ಈಗಲೂ ಕೂಡ Online e-paper ಓದುತ್ತೇನೆ. ಪ್ರಜಾವಾಣಿಯ ಪುಟಗಳು, ಅದರ ಪುರವಣಿಗಳು ಅದೇನೊ ಕಣ್ಣಿಗೆ ಮುದ ನೀಡುತ್ತವೆ. ಪ್ರಜಾವಾಣಿಯ fonts, typeset ಗೆ ನಾನು ಬಹುಶಃ ಹೊಂದಿಕೊಂಡಿದ್ದೇನೆ. 'ಸಾಪ್ತಾಹಿಕ ಪುರವಣಿ', 'ಮಕ್ಕಳು ಮನೋರಂಜನೆ', 'ಸಿನೆಮಾ ರಂಜನೆ' ಪುರವಣಿಗಳನ್ನು ಪೂರ್ತಿಯಾಗಿ ಓದುತ್ತೇನೆ. ವೆಂಕಟಸುಬ್ಬಯ್ಯನವರ 'ಇಗೋ ಕನ್ನಡ', ವಾಸುದೇವರ ವಿಜ್ಞಾನ ಲೇಖನಗಳನ್ನು ಕೂಡ. ಪ್ರಜಾವಾಣಿ 50 ವರ್ಷಗಳಿಂದ ತನ್ನ ಘನತೆಯನ್ನು ಕಾಪಾಡಿಕೊಂಡು ಬಂದಿದೆ. ಅದು Impartial ಕೂಡ ಹೌದು ಅನ್ನೋದು ನನ್ನ ಅಭಿಪ್ರಾಯ. ಅದರ ಸುದ್ದಿಗಳಲ್ಲಿಯೂ ಏನೋ ಒಂದು ಸಮಗ್ರತೆ ಇದೆ, ಒಂದು ಘನತೆ ಇದೆ.


ಇನ್ನು ವಿಜಯ ಕರ್ನಾಟಕದ ವಿಷಯಕ್ಕೆ ಬಂದರೆ, ಮೊದಲನೆಯದಾಗಿ, ಪಕ್ಕಾ Business Minded, Partial. ಬಹುಶಃ ಅದು ತನ್ನ Circulation ಹೆಚ್ಚಿಸಿಕೊಂದಿದ್ದು ತನ್ನ 'ರೂ 1' ತಂತ್ರದಿಂದ. ವಿಜಯ ಕರ್ನಾಟಕ ಈಗ Times of India ಒಡೆತನಕ್ಕೆ ಸೇರಿಯಾಯ್ತು. ಇನ್ನು ಮುಂದೆ ಹೇಗೋ ಏನೋ.... ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯ ಕರ್ನಾಟಕದಲ್ಲಿ ಬರುತ್ತಿದ್ದ ಸುದ್ದಿಗಳು, ಲೇಖನಗಳನ್ನು ನೊಡಿದರೆ ತುಂಬಾ ಸಿಟ್ಟು ಬರುತ್ತದೆ. ಪತ್ರಿಕೆಯ ಪೂರ್ತಿ 'ಕನ್ನಡ ನಾಡು' ಪಾರ್ಟಿಯ ವಿಷಯಗಳೇ!!! ಅದನ್ನು ಯಾರು ಓದುತ್ತಿದ್ದರೋ ಗೊತ್ತಿಲ್ಲ !! ಮೊದಲನೆಯ ಪುಟದಿಂದ ಕೊನೆಯ ಪುಟದವರೆಗೂ ಕೇವಲ 'ತೆಂಗಿನ ಕಾಯಿ'ಯ ಜಾಹೀರಾತುಗಳೆ ತುಂಬಿರುತ್ತಿದ್ದವು. ಇಷ್ಟೆಲ್ಲಾ ಮಾಡಿದ್ದರೂ ಕೊನೆಗೆ ಶ್ರೀಮಾನ್ ವಿಜಯ ಸಂಕೇಶ್ವರರೇ ಗೆಲ್ಲಲ್ಲಿಲ್ವಲ್ಲಾ!! ಛೇ !!! ಆಮೇಲೆ ವಿಜಯ ಸಂಕೇಶ್ವರರು ಜನತಾದಳ ಸೇರಿದ ಮೇಲೆ ಬರೀ ಜನತಾದಳದ್ದೇ ಸುದ್ದಿ.

ಆದರೆ ವಿಜಯ ಕರ್ನಾಟಕ ಕರ್ನಾಟಕದಲ್ಲಿ ನಂ 1 ಏಕೆ ಎಂಬುದು ನನ್ನನ್ನು ಕಾಡುತ್ತಿರುವ ಯಕ್ಷಪ್ರಶ್ನೆ !! ವಿಜಯ ಕರ್ನಾಟಕದ ಸಂಪಾದಕೀಯದಲ್ಲಿ ಪ್ರಜಾವಾಣಿಗಿಂತ ಕೆಲವು ಹೆಚ್ಚು ಲೇಖನಗಳು ಬರುತ್ತವೆ. ಆದರೆ ಕೇವಲ ಸಂಪಾದಕ್ಕೀಯಕ್ಕೋಸ್ಕರ ಜನ ವಿಜಯ ಕರ್ನಾಟಕ ಓದುತ್ತಾರ ?

ಬಹುಶಃ ಬಹಳ ವರ್ಷಗಳಿಂದ ಕನ್ನಡ ಪತ್ರಿಕೆಗಳಲ್ಲಿ ಹೆಚ್ಚು ಪ್ರಸಾರ ಹೊಂದಿದ್ದ ಪ್ರಜಾವಾಣಿ ಜನರಿಗೆ Monotonous ಆಯ್ತೇ ??

ಆದರೂ ನನಗೆ ಈಗಲೂ ಪ್ರಜಾವಾಣಿ ಎಂದರೆ ಅದೇನೋ ಪ್ರೀತಿ, ಅದೇನೋ ಗೌರವ. ಬಿಡಿಸಲಾಗದ ನಂಟು ಅನ್ನಿಸುತ್ತೆ !!!!

0 Comments:

Post a Comment

Subscribe to Post Comments [Atom]

<< Home