Sunday, October 08, 2006

ಬಂದ್ !!!

ಅಕ್ಟೋಬರ್ 4ನೇ ತಾರೀಖು ಕರ್ನಾಟಕ ಬಂದ್ ನಡೆಯಿತು. ಸಂಪೂರ್ಣ ಯಶಸ್ವಿ ಕೂಡ ಅಯಿತು. ಆದರೆ ಬಂದ್ ಮಾಡಿದ ಉದ್ದೇಶಗಳು ಈಡೇರುತ್ತದೋ ಇಲ್ಲವೋ, ಕಾದು ನೋಡಬೇಕು. ಬಹುಶಃ ಆ ಬಂದ್ ಕೇಂದ್ರ ಸರ್ಕಾರಕ್ಕೆ ನೀಡಿದ ಸೂಚನೆ "ಕರ್ನಾಟಕಕ್ಕೆ ಏನಾದರೋ ಬೆಳಗಾವಿ ವಿಷಯದಲ್ಲಿ ಅನ್ಯಾಯ ಮಾಡಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ" ಎಂದು ನನ್ನ ಅನಿಸಿಕೆ. ಏನೇ ಇರಲಿ, ಆ ವಿಷಯ ಪಕ್ಕಕ್ಕಿಡೋಣ.

ಒಂದು ಸ್ವಾರಸ್ಯಕರ ಸಂಗತಿಯನ್ನು ನಾನು ಬಂದ್‍ನಲ್ಲಿ ನೋಡಿದೆ. ಕನ್ನಡ ಪರ ಸಂಘಟನೆಗಳು ಬೆಂಗಳೂರಿನಲ್ಲೆಲ್ಲಾ ಅಂಟಿಸಿದ್ದ ಭಿತ್ತಿ ಪತ್ರವನ್ನು ಓದಿದರೆ, ಎಲ್ಲರಿಗೂ ಕಾಣುವಂತಹ ವಾಕ್ಯ "ಬೆಳಗಾವಿ ವಿಷಯದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತೋರುತ್ತಿರುವ ಮಲತಾಯಿ ಧೋರಣೆಯನ್ನು ಖಂಡಿಸಿ ಕರ್ನಾಟಕ ಬಂದ್". ನನಗೆ ಈ ವಾಕ್ಯದಲ್ಲಿ ಕಂಡು ಬಂದ ಸ್ವಾರಸ್ಯಕರ ಪದ 'ಮಲತಾಯಿ ಧೋರಣೆ'. ನಾವು ಏನಕ್ಕೆ ಈ ಪದವನ್ನು ಈ ತರಹದ ಸ್ಠಿತಿಗಳಲ್ಲಿ ಬಳಸುತ್ತೇವೆ ?? ಮಲ ತಾಯಂದಿರನ್ನು ಈ ತರಹದ ಸಂಬಂಧಗಳಿಗೆ Branded ಮಾಡಿಬಿಟ್ಟಿದ್ದೇವಲ್ಲವೆ ?? ಕೆಲ ಮಲತಾಯಂದಿರು Partiality ಮಾಡಬಹುದು. ಅಂಥವರನ್ನು ನಾನು ಕೂಡ ನೋಡಿದ್ದೇನೆ. ಹೆಚ್ಚಿನ ಟೀವಿ ದಾರಾವಾಹಿಗಳಲ್ಲಿ ಕೂಡ ಅದನ್ನೇ ತೋರಿಸುತ್ತಾರೆ.

ನೋಡಿ, ಕೆಲವರನ್ನು ನೋಡಿ ಜನ ಎಲ್ಲಾ ಮಲತಾಯಂದಿರೂ Partiality ಮಾಡುತ್ತಾರೆ ಅಂತ ಪಟ್ಟ ಕಟ್ಟಿದ್ದಾರೆ !!! ಇದೇ ರೀತಿ ಇನ್ನು ಹಲವು ಉದಾಹರಣೆಗಳನ್ನು ಕೊಡಬಹುದು. ರಾಜ್‍ಕುಮಾರ್ ನಿಧನರಾದಾಗ ನಡೆದ ಗಲಾಟೆಯಿಂದ, ಹೊರಗಿನವರು ಕನ್ನಡಿಗರೆಲ್ಲಾ ಹೀಗೆ ಎಂದು ಕರೆದಿದ್ದರು!!. ನೋಡಿ ಜನ ಕೆಲವರನ್ನ ನೋಡಿ ಎಲ್ಲರನ್ನೂ ಹೇಗೆ Generalise ಮಾಡುತ್ತಾರೆ !! ಇರಲಿ ಬಿಡಿ ... ಬಂದ್‍ ದಿನದ ಅಪರೂಪದ ಸಂಗತಿಗಳು ಇನ್ನೂ ಇವೆ.

ಬಂದ್ ದಿನದ ರಜೆ ಅಂದರೆ, ಎನೋ ಒಂದು ತರಹದ Uneasyness. ಮಾಡಲು ಏನೂ ಕೆಲಸವಿರೋದಿಲ್ಲ. ಹೊರಗೆ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕಾಣದ Calmness. ಒಂದು ತರಹ Uneasy Calm. ಹೊರಗೆ ರಸ್ತೆಯಲ್ಲಿ Vehicleಗಳ ಅಬ್ಬರ ಇಲ್ಲ. ಬಂದ್ ದಿನ ಎಷ್ಟು ಹೊತ್ತಾದರೂ ಸಮಯವೇ ಹೋಗುವುದಿಲ್ಲ. ಅದರ ಮೇಲೆ ಟೀವಿಯಲ್ಲಿ ಕೂಡ ಬಹುಪಾಲು ಚಾನೆಲ್‍ಗಳೂ ಬಂದ್. ಸುತ್ತಮುತ್ತ ಎಲ್ಲಿ ನೋಡಿದರೂ ಸಂಪೂರ್ಣ ನಿಶ್ಯಬ್ಧ. ಬಹುಶಃ ನಾನು Hostel ಬಿಟ್ಟ ಮೇಲೆ, ತುಂಬ ದಿನಗಳ ನಂತರ ಹಕ್ಕಿಗಳ ಚಿಲಿ-ಪಿಲಿಯನ್ನು ಕೇಳಿದೆ. ದಿನಾ ಹಕ್ಕಿಗಳ ಚಿಲಿ-ಪಿಲಿ ಇದ್ದರೂ, ಹೊರಗಿನ ಗಲಾಟೆಯಲ್ಲಿ ಅದು ಕೇಳುವುದೇ ಇಲ್ಲ !! ನಾವು ಅದನ್ನೇ ಗಮನ ಇಟ್ಟು ಕೇಳಿಸಿಕೊಳ್ಳುವುದಕ್ಕೆ ನಮಗೆ ಅಷ್ಟು ಸಮಯ, ಸಂಯಮ ಎಲ್ಲಿ ? ಈ ದಿನಗಳ ವೇಗದ ಬದುಕಿನಲ್ಲಿ ನಮಗೆ ನಮ್ಮ ಕೆಲಸವಲ್ಲದೇ, ಇನ್ನೂ ಒಂದು ಪ್ರಪಂಚ ಇದೆ. ಮರ, ಗಿಡ, ಹಕ್ಕಿ, ಪ್ರಾಣಿಗಳೂ ಇವೆ ಎಂಬುದನ್ನು ಮರೆತ್ತಿದ್ದೇವೆ. ಅಥವಾ ನಮಗೆ ಆ ಪ್ರಪಂಚದಲ್ಲಿ ಕಾಲ ಕಳೆಯುವುದಕ್ಕೆ ಸಮಯ ಇಲ್ಲದಾಗಿದೆ.

ಚಿಕ್ಕವರಾಗಿದ್ದಾಗ ಜೀವನವೇ ಒಂದು ಆನಂದ. ಆಟ-ಪಾಠ, ದಸರಾ, ಬೇಸಿಗೆಯ ರಜೆಗಳು ನಮ್ಮನ್ನು ಪ್ರಕೃತಿ ಜೊತೆ ಕಾಲ ಕಳೆಯಲು ಸಾಕಷ್ಟು ಸಮಯ ನೀಡುತ್ತಿದ್ದವು. ದೊಡ್ಡವರಾಗುತ್ತಾ, ಆ ರಜಾ ದಿನಗಳೂ ಇಲ್ಲ, ಪ್ರಕೃತಿಯ ಜೊತೆ ಕಾಲ ಕಳೆಯುವುದಕ್ಕೆ ಸಮಯವೂ ಇಲ್ಲದಂತಾಗಿದೆ.

ಅದಕ್ಕೆ ಗೋಪಾಲ ಕೃಷ್ಣ ಅಡಿಗರು 'ಯಾವ ಮೋಹನ ಮುರಳಿ'ಯಲ್ಲಿ ಹೇಳಿದ್ದು - "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ನಡೆವುದೇ ಜೀವನ'. ಈ ವಾಕ್ಯ ಎಷ್ಟು ನಿಜ ಅಲ್ಲವೇ !!!

1 Comments:

Blogger Puthali said...

ತು೦ಬ ಚೆನ್ನಾಗಿ ಹೆಳದ್ದೆ... :)

9:05 AM  

Post a Comment

Subscribe to Post Comments [Atom]

<< Home