Monday, January 08, 2007

ಕನ್ನಡ ರತ್ನಕೋಶ

ನಾನು ಪ್ರೌಢಶಾಲೆಯಲ್ಲಿದ್ದಾಗ ಪತ್ರಿಕೋದ್ಯಮ ಸಂಘದ ಸದಸ್ಯನಾಗಿದ್ದೆ. ಅಲ್ಪ-ಸ್ವಲ್ಪ ಲೇಖನ, ಪ್ರಬಂಧ, ವ್ಯಂಗ್ಯ ಚಿತ್ರ ಬರೆಯುವುದು, ಆ ಸಂಘದ ಚಟುವಟಿಗೆಗಳಲ್ಲಿ ಸೇರಿದ್ದವು. ಪ್ರತಿ ವರ್ಷವೂ ನವೆಂಬರ್ 14ನೇ ತಾರೀಖಿನಿಂದ 20ನೇ ತಾರೀಖಿನವರೆಗೆ ಆಚರಿಸಲಾಗುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಪತ್ರಿಕೋದ್ಯಮ ಸಂಘದ ವತಿಯಿಂದ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿತ್ತು. ಆಗಲೇ ನನ್ನ ಕೈಗೆ ಸಿಕ್ಕ ಪುಸ್ತಕ 'ಕನ್ನಡ ರತ್ನಕೋಶ'.


'ಕನ್ನಡ ರತ್ನಕೋಶ'ವು ಕನ್ನಡ-ಕನ್ನಡ ನಿಘಂಟಿನ ಒಂದು ಸಂಕ್ಷಿಪ್ತವಾದ ರೂಪ. ಒಂದು ಕೈಪಿಡಿ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ರತ್ನಕೋಶವನ್ನು ಪ್ರಕಾಶಿಸುತ್ತದೆ. ಜತೆಗೆ ಇದರ ಬೆಲೆ ಕೇವಲ ಐದು ರೂಪಾಯಿ !!! ಪ್ರತಿಯೊಬ್ಬ ಕನ್ನಡಿಗನ ಕೈಗೂ ಈ ಪುಸ್ತಕ ಸೇರಲಿ ಎಂಬ ಉದ್ದೇಶದಿಂದ ಇದರ ಬೆಲೆಯನ್ನು ಎಲ್ಲರ ಕೈಗೆ ಎಟುಕುವಂತೆ ಇರಿಸಲಾಗಿದೆ. ಆದರೆ 'ಕನ್ನಡ ರತ್ನಕೋಶ'ದಲ್ಲಿರುವ ಜ್ಞಾನ ಭಂಡಾರ ಮಾತ್ರ ಅಪಾರ. ಎಷ್ಟೋ ಕೇಳೇ ಇಲ್ಲದ ಕನ್ನಡದ ಪದಗಳನ್ನು ರತ್ನಕೋಶದಲ್ಲಿ ಕಾಣಬಹುದು. ನಾನು ಕನ್ನಡ ಪದಬಂಧಗಳನ್ನು ಭರ್ತಿಮಾಡುವುದರಲ್ಲಿ ರತ್ನಕೋಶದ ಪಾತ್ರವೇ ಹೆಚ್ಚು.

ರತ್ನಕೋಶ ಕೇವಲ ಕನ್ನಡ-ಕನ್ನಡ ನಿಘಂಟಲ್ಲ, ಅದರಲ್ಲಿ ಕರ್ನಾಟಕ ಬಗ್ಗೆ ಹಲವು ಮಾಹಿತಿಯನ್ನು ನೀಡಲಾಗಿದೆ. ಭಾರತೀಯ ಸಂವತ್ಸರಗಳ, ರಾಶಿಗಳ, ನಕ್ಷತ್ರಗಳ ಹೆಸರುಗಳ ಪಟ್ಟಿಯನ್ನೂ ನೀಡಲಾಗಿದೆ. ಅದರ ಜತೆಗೆ ಜಗತ್ತಿನ ರಾಷ್ಟ್ರಗಳ ಹೆಸರುಗಳು, ಅವುಗಳ ರಾಜಧಾನಿಗಳನ್ನು ನೀಡಲಾಗಿದೆ.

ಕನ್ನಡ ರತ್ನಕೋಶವು ಕನ್ನಡದ ಜ್ಞಾನವನ್ನು ಹೆಚ್ಚಿಸುತ್ತದೆಯಲ್ಲದೇ, ಕನ್ನಡದ ಮೇಲೆ ಇನ್ನೂ ಹೆಚ್ಚಿನ ಅಭಿಮಾನವನ್ನು ಮೂಡಿಸುತ್ತದೆ. ಕನ್ನಡ ರತ್ನಕೋಶ ಪ್ರತಿಯೊಬ್ಬ ಕನ್ನಡಿಗನೂ ಸದಾ ತನ್ನ ಜತೆ ಇಟ್ಟುಕೊಳ್ಳಬೇಕಾದ ಒಂದು ಕೈಪಿಡಿ.

2 Comments:

Blogger Puthali said...

ನಾನು ಈ ಪುಸ್ಥಕವನು ಒದ ಬೆಕು, ನ್ನಿನ ಅಥಿರ ಇದ್ದಯ?

6:33 PM  
Anonymous Anonymous said...

ನನ್ನ ಹತ್ತಿರ ಇದೆ. ಆದರೆ ಅದು ಊರಿನಲ್ಲಿದೆ.
ಬಹುಶಃ ಈ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಥವಾ ಗಾಂಧಿ ಬಜಾರ್‍ನಲ್ಲಿರುವ ಅಂಕಿತ ಪುಸ್ತಕದಲ್ಲಿ ದೊರಯಬಹುದು.

8:36 PM  

Post a Comment

Subscribe to Post Comments [Atom]

<< Home