Wednesday, November 01, 2006

ಕನ್ನಡ ಎಂದರೆ ಏನು ?

ಕನ್ನಡದ ಬಗ್ಗೆ ನಿಸಾರ್ ಅಹ್ಮದ್‍ರವರು ರಚಿಸಿರುವ ಈ ಕವಿತೆಯಲ್ಲಿ ಈ ಪ್ರಶ್ನೆಗೆ ಉತ್ತರವಿದೆ...

ಕನ್ನಡವೆಂದರೆ ಬರಿ ನುಡಿಯಲ್ಲ,
ಹಿರಿದಿದೆ ಅದರರ್ಥ ;
ಜಲವೆಂದರೆ ಕೇವಲ ನೀರಲ್ಲ.
ಅದು ಪಾವನ ತೀರ್ಥ.

ಕನ್ನಡವೆಂದರೆ ಬರಿ ನಾಡಲ್ಲ ;
ಭೂಪಟ, ಗೆರೆ, ಚುಕ್ಕೆ ;
ಮರವೆಂದರೆ ಬರಿ ಕಟ್ಟಿಗೆಯೆ ?
ಶ್ರೀಗಂಧದ ಚಕ್ಕೆ.

ಕನ್ನಡ ಬರಿ ಕರ್ನಾಟಕವಲ್ಲ
ಅಸೀಮ, ಅದು ಅದಿಗಂತ ;
ದೇವರು ಕೇವಲ ವಿಗ್ರಹವಲ್ಲ ,
ಅಂತರ್ಭಾವ ಅನಂತ.

ಕನ್ನಡವೆಂದರೆ ಜನಜಂಗುಳಿಯಲ್ಲ
ಜೀವನ ಶೈಲಿ, ವಿಧಾನ ;
ವಾಯುವೆಂದರೆ ಬರಿ ಹವೆಯೇ ಅಲ್ಲ :
ಉಸಿರದು, ಪಂಚಪ್ರಾಣ.

ಕನ್ನಡವಲ್ಲ ತಿಂಗಳು ನಡೆಸುವ
ಗುಲ್ಲಿನ ಕಾಮನಬಿಲ್ಲು ;
ರವಿ ಶಶಿ ತಾರೆಯ ನಿತ್ಯೋತ್ಸವವದು,
ಸರಸತಿ ವೀಣೆಯ ಸೊಲ್ಲು.

- ನಿಸಾರ್ ಅಹ್ಮದ್

0 Comments:

Post a Comment

Subscribe to Post Comments [Atom]

<< Home