Wednesday, November 01, 2006

'ಕೈ ಕೆಸರಾದರೆ ಬಾಯಿ ಮೊಸರು'

'Reservation' - ಈಗ ನಮ್ಮ ದೇಶದಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವ ಪದ ಅನ್ನಿಸುತ್ತೆ. ನಾನು ಇಲ್ಲಿ ಹೇಳ ಹೊರಟಿರುವುದು ಆ 'Reservation' ಅಲ್ಲಾ !!!! ಅದರ ಬಗ್ಗೆ ಬರಿಯೋದಕ್ಕೆ ಶುರು ಮಾಡಿದ್ರೆ ನನ್ನ ಜೀವನ ಪೂರ್ತಿ ಬರೆಯಬಹುದು ಅನ್ನಿಸುತ್ತೆ !!!

ನಾನು ಇಲ್ಲಿ ಹೇಳೋ '
Reservation', ನಮ್ಮ ಬಸ್, ರೈಲುಗಳಲ್ಲಿ ಮಾಡೋ 'ಮುಂಗಡ ಸೀಟು ಕಾಯ್ದಿರಿಸುವುದು' !!

ಮೊನ್ನೆಯ ದೀಪಾವಳಿಗೆ ಊರಿಗೆ ಹೋಗಲು ಹಾಸನದ ಬಸ್ಸಿಗೆ
Reserve ಮಾಡಿಸಿದ್ದೆ. ಹಬ್ಬದ ದಿನಗಳ ಹಿಂದಿನ ದಿನ ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ಭಾರಿ ಜನ ಜಂಗುಳಿ ಇರುತ್ತದೆ. ಎಲ್ಲರೂ ತಮ್ಮ ತಮ್ಮ ಊರುಗಳಿಗೆ ಹೊರಟಿರುತ್ತಾರೆ. Reserve ಮಾಡಿಸಿದರೆ ಬಸ್‍ನಲ್ಲಿ ಸೀಟು ಹಿಡಿಯುವುದು ತಪ್ಪುತ್ತದೆ.

ಆದರೆ ಹಬ್ಬದ ಹಿಂದಿನ ದಿನ ಬೆಂಗಳೂರಿನಿಂದ ಹೊರಡುವವರಿಗೆ '
Reservation' ನ್ನಿನ ಇನ್ನೊಂದು ಮುಖ ಗೊತ್ತಿರುತ್ತದೆ. ಆ ಇನ್ನೊಂದು ಮುಖ Majestic ನಲ್ಲಿ ಆಗೋ 'Traffic Jam' !!!!! ನಾನು ಈ ಬಾರಿಯೂ ಇದನ್ನು ಎದುರಿಸಬೇಕಾಯಿತು. ನನಗೆ ಇದು ಮೂರನೇ ಬಾರಿ. ಈ ಬಾರಿ J C Road ನಿಂದ ಬಸ್ ನಿಲ್ದಾಣದವರೆಗೂ ಪೂರ್ತಿ 'Traffic Jam'. ಪ್ರತಿ ಬಾರಿಯೂ ಆಗುವ ಈ 'Traffic Jam' ಗೆ ಕಾರಣ ಇನ್ನೂ ಗೊತ್ತಾಗಿಲ್ಲ. ಇದರ ಮೇಲೆ ಮಾಡಿಸಿರುವ 'Reservation' ಬೇರೆ !!! ಪ್ರತಿ ಕ್ಷಣವೂ ಆತಂಕ, ಎಲ್ಲಿ ಬಸ್ ಹೊರಟು ಹೋಗುತ್ತದೋ ಅಂತ. J C Road ನಲ್ಲೇ ನನಗೆ ಆತಂಕ ಶುರು ಆಗಿತ್ತು. ಬಸ್ ಹೊರಡುವುದಕ್ಕೆ ಕೇವಲ 30 ನಿಮಿಷಗಳಿದ್ದವು. ಬಸ್ಸಿನಿಂದ ಇಳಿದು ಬೇರೆ ದಾರಿಯಲ್ಲಿ ಆಟೋನಲ್ಲಿಯಾದರೋ ಹೋಗೋಣವೆಂದರೆ ಅಲ್ಲೂ 'Traffic Jam' ಆಗಿದ್ದರೆ ಎಂಬ ಯೋಚನೆ!!

ಕೇವಲ ಅರ್ಧ ಗಂಟೆ ಇತ್ತು. ಇನ್ನು ಸಿಟಿ ಬಸ್ ನಲ್ಲೇ ಹೋಗಿ ಊರಿಗೆ ಬಸ್ ಹಿಡಿಯುವುದು ಕನಸು, ಎಂದು ಅನಿಸಿತು. ಸಿಟಿ ಬಸ್ ನಿಂದ ಇಳಿದು ನಡೆದೇ ಬಸ್ ನಿಲ್ದಾಣಕ್ಕೆ ಹೊರಟೆ. ಒಂದು ವಿಚಿತ್ರವೇನೆಂದರೆ, ಬೀದಿಯಲ್ಲಿ ವಾಹನಗಳೆಲ್ಲಾ ಹಾಗೇ ನಿಂತಿದ್ದವು. ರಸ್ತೆ ಬದಿಯಲ್ಲಿ ಜನ ಬಸ್ ನಿಲ್ದಾಣಕ್ಕೆ ಆತಂಕದಿಂದ ದೌಡಾಯಿಸುತಿದ್ದರು. ನಾನೂ ಆತಂಕದೊಡನೆಯೇ ಬಸ್ ನಿಲ್ದಾಣಕ್ಕೆ ಓಡುತ್ತಾ ನಡೆದೇ ಹೋದೆ.

ಆದರೆ '
Reservation' ಮಾಡಿಸದೇ ಇದ್ದರೆ ಆರಾಮಾಗಿ ಹೋಗಬಹುದಿತ್ತು. ಆ ಆತಂಕ ಇರುತಿರಲಿಲ್ಲ. 2 km ನಡೆದು ಹೋಗುವುದು ತಪ್ಪುತ್ತಿತ್ತು. ಹಾಗಾದರೆ 'Reservation' ಒಂದು ಫಜೀತಿಯಲ್ಲವೇ ? ಆ ಬಸ್ಸಿನ ಸಮಯಕ್ಕೇ ಸರಿಯಾಗಿ ಹೋಗಬೇಕು. ಆ ಬಸ್ ಹೋಯಿತು ಅಂದರೆ ಹಣವನ್ನು ಕೂಡ ಕಳೆದು ಕೊಳ್ಳಬೇಕಾಗುತ್ತದೆ. ಆದರೆ ಬಸ್ ನಿಲ್ದಾಣವನ್ನು ಕಷ್ಟ ಪಟ್ಟು ತಲುಪಿ ಬಸ್ ನಲ್ಲಿ ನನ್ನ ಸೀಟಿನಲ್ಲಿ ಕೂತು, ಊರಿಗೆ ಸುಖವಾಗಿ ಹೋಗುವಾಗ ಸಿಗುವ ಸಮಾಧಾನ, ನನಗೆ ಈ ಸಾಲನ್ನು ನೆನಪಾಗುತ್ತಿದೆ - 'ಕೈ ಕೆಸರಾದರೆ ಬಾಯಿ ಮೊಸರು', ಎಷ್ಟು ನಿಜವಲ್ಲವೇ !!!!

0 Comments:

Post a Comment

Subscribe to Post Comments [Atom]

<< Home