ಅವರ್ರಾ? ಗಂಟೆನಾ?
"ಇನ್ನು ಎಷ್ಟ್ ಹೊತ್ತಾಗುತ್ತಪ್ಪ?"
"ಇನ್ನು ಮೂರ್ ಅವರ್ ಅಗುತ್ತೆ ಸಾರ್."
ಇಂತಹ ಪ್ರಶ್ನೆಗೆ, ಹೆಚ್ಚಾಗಿ ಬೆಂಗಳೂರಿನ ಸುತ್ತಮುತ್ತ ಇದೇ ಮಾದರಿಯಲ್ಲಿ ಉತ್ತರ ಬರುತ್ತದೆ. ಅಯ್ಯೊ! ಇದೆಂತಹ ಪ್ರಶ್ನೆ, ಈ ಪ್ರಶ್ನೆಗೆ ಹಿಂದೆ ಇಲ್ಲ, ಮುಂದೆ ಇಲ್ಲ! ಜೊತೆಗೆ ಈ ಪ್ರಶ್ನೆಗೂ, ಉತ್ತರಕ್ಕೂ, ಈ ಬರಹಕ್ಕೂ ಏನು ಸಂಬಂಧ ಎನ್ನುತ್ತೀರ? ನಾನು ಹೇಳುತ್ತಿರುವುದು ಈ ಉತ್ತರದಲ್ಲಿನ ಕನ್ನಡ ಭಾಷೆಯ ಬಗ್ಗೆ ಅಷ್ಟೆ.
ಮೂರ್ ಅವರ್! ಅಯ್ಯೋ, ಕನ್ನಡದಲ್ಲಿ 'ಗಂಟೆ' ಎನ್ನುವ ಪದವಿಲ್ಲವೇ ಬಳಸಲಿಕ್ಕೇ? ಹೋಗಲಿ ಬೇಡ, ತ್ರೀ ಅವರ್ಸ್ ಅಂದರೂ ಪರವಾಗಿಲ್ಲ, ಕನ್ನಡ ಅಂಕಿಯ ಜೊತೆ ಬಲವಂತದ ಇಂಗ್ಲೀಷ್ ಬಳಸುವುದೇತಕ್ಕೆ? ಏನು, ಮೂರು ಕೆಜಿ ಎನ್ನುವುದಿಲ್ಲವೇ ಎನ್ನುವುದಾದರೆ, ಕೆಜಿಗೆ ಕನ್ನಡದಲ್ಲಿ ಯಾವ ಪದವೂ ಇಲ್ಲ. ಇಲ್ಲಿ ಅಂಕಿ, ಅಳತೆಗಳ ವಿಚಾರವಲ್ಲ, ಇಲ್ಲಿ ಮುಖ್ಯವಾದುದು, ಕನ್ನಡದಲ್ಲಿ ಬಲವಂತವಾಗಿ ಇಂಗ್ಲೀಷ್ ತೂರಿಸುವುದೇಕೆ?
ಹೌದು, ನಾವೆಲ್ಲರೂ, ದಿನನಿತ್ಯದಲ್ಲಿ ಆಂಗ್ಲ ಭಾಷೆಯನ್ನು ಲೀಲಾಜಾಲವಾಗಿ ಈಗೀಗ ಬಳಸುತ್ತೇವೆ. ಕೆಲವು ಆಂಗ್ಲ ಪದಗಳಿಗೆ ಕನ್ನಡದಲ್ಲಿ ಸಮಾನಾಂತರ ಪದಗಳಿಲ್ಲ. ಆ ಸಂಧರ್ಭಗಳಲ್ಲಿ ಅವುಗಳ ಬಳಕೆ ಸರಿ, ಸಮಂಜಸ. ಕೆಲವು - ಮೊಬೈಲ್, ಸ್ಪೀಕರ್... ಇವುಗಳಿಗೆ ಕನ್ನಡ ಪದಗಳನ್ನು ಸೃಷ್ಟಿಸಬಹುದಾದರೂ ಅವುಗಳ ಅಗತ್ಯವಿಲ್ಲ. ಆದರೆ ಈಗಾಗಲೇ ಇರುವ ಕನ್ನಡ ಪದಗಳ ಬದಲು ಇಂಗ್ಲೀಷ್ ಪದವೇಕೆ?
ನೋಡಿ, ತಿಂಡಿ - tiffin, ಲೋಟ - glass, ತಟ್ಟೆ - plate, ಖಂಡಿತ -guarantee, ಕೋಣೆ - room.. ಹೀಗೆ ಪಟ್ಟಿ ಮುಗಿಯುವುದೇ ಕಾಣೆ! ಏಕೆ ಹೀಗೆ? ಸ್ವಲ್ಪ ನಮ್ಮವರಿಗೆ ಇಂಗ್ಲೀಷಿನ ವ್ಯಾಮೋಹ ಹೆಚ್ಚೇ ಎನ್ನಿ. ನಾನು ಇಲ್ಲಿ ಇಂಗ್ಲೀಷನ್ನು ಕಲಿಯಬಾರದೆನ್ನುತ್ತಿಲ್ಲ. ಕನ್ನಡ ಬಳಸುವ ಜಾಗದಲ್ಲಿ 'ಆದಷ್ಟು' ಕನ್ನಡ ಪದಗಳನ್ನೇ ಬಳಸುವುದಕ್ಕೇನು? ಇದು ಕೇವಲ ಕನ್ನಡ-ಇಂಗ್ಲೀಷಿನ ಚರ್ಚೆಯಲ್ಲ. ಕನ್ನಡದಲ್ಲಿ ಕನ್ನಡ ಪದಗಳ ಜಾಗದಲ್ಲಿ ಸಂಸ್ಕೃತ ಪದಗಳನ್ನೂ ಹೇರಳವಾಗಿ ಬಳಸುತ್ತೇವೆ. ಕಣ್ಣಾಸ್ಪತ್ರೆ - ನೇತ್ರಾಲಯ, ಬೀದಿ - ರಸ್ತೆ, ಗುಡಿ - ದೇವಸ್ಥಾನ. ವಾರಗಳ ಹೆಸರುಗಳನ್ನು ಪೂರ್ತಿಯಾಗಿ ಸಂಸ್ಕೃತದಿಂದಲೇ ಎರವಲು ಪಡೆದಿದ್ದೇವೆ. ನೋಡಿ, ಕಣ್ಣಾಸ್ಪತ್ರೆ ಎಂದು ಹೆಸರಿಟ್ಟರೆ, ಯಾವುದೋ ಮೂರನೇ ದರ್ಜೆಯ ಆಸ್ಪತ್ರೆ ಎಂದು ಜನ ಎಂದುಕೊಂಡಾರು ಅಂತ ಭಾವಿಸಿ, ಅತ್ಯುತ್ತಮ ದರ್ಜೆಯದ್ದು ಎಂದೆನಿಸಿಕೊಳ್ಳುತ್ತದೆಂದು, 'ನೇತ್ರಾಲಯ' ಎಂದು ಹೆಸರಿಡುತ್ತಾರೆ. ಒಟ್ಟಿನಲ್ಲಿ, ಸಂಸ್ಕೃತದ ಪದಗಳನ್ನು ಬಳಸಿದರೆ ಉತ್ತಮ ದರ್ಜೆ ಎಂಬುದು ಹೆಚ್ಚಿನ ಜನರ ನಂಬಿಕೆ. ಕನ್ನಡಿಗರಿಗೆ ಕನ್ನಡದ ಮೇಲೆ ಏಕೀ ಕೀಳರಿಮೆ?
ಇದೇ ವಾದವನ್ನು ನಾನು ಕೆಲವರ ಮುಂದೆ ಹಿಂದೆ ಇರಿಸಿದಾಗ, 'ಬೇರೆ ಭಾಷೆಯ ಪದಗಳನ್ನು ಸ್ವೀಕರಿಸುವ ದೊಡ್ಡತನವಿರಬೇಕು', ಎಂಬ ಉತ್ತರ ಬಂತು. ಇದರ ಜೊತೆಗೆ ಇಂಗ್ಲೀಷನ್ನು ಉದಾಹರಿಸುತ್ತಾರೆ. ಹೌದು, ಇಂಗ್ಲೀಷಿನಲ್ಲಿ ಇಂದು ಹೆಚ್ಚಾಗಿ ಬೇರೆ ಭಾಷೆಯ ಪದಗಳೇ ಇವೆ. ಅದು ಇಂದು ಸರ್ವ ವ್ಯಾಪಿ. ಆದರೆ ಅದು ಸರ್ವವ್ಯಾಪಿಯಾಗಿರುವುದಕ್ಕೆ ಕಾರಣಗಳೇ ಬೇರೆ. ಬಹುಪಾಲು ಜಗತ್ತನ್ನು ಆವರಿಸಿದ ಬ್ರಿಟಿಷ್ ಸಾಮ್ರಾಜ್ಯ ಒಂದಾದರೆ, ಯು.ಎಸ್.ಎ ನಲ್ಲಿ ಅದರ ಬಳಕೆ ಇನ್ನೊಂದು ಕಾರಣ. ಕನ್ನಡದಲ್ಲಿಯೂ ಹೇರಳವಾಗಿ ಬೇರೆ ಭಾಷೆಯ ಪದಗಳನ್ನು ಬಳಸಿದರೆ, ಅದೂ ಇಂಗ್ಲೀಷಿನಂತೆ ಆಗಬಹುದು ಎಂದೆನಿಸಿದರೆ ಅದು ಅಸಾಧ್ಯ. ಕನ್ನಡ ಭಾಷೆಯಲ್ಲಿ ಕನ್ನಡ ಪದಗಳೇ ಇಲ್ಲದಂತಾಗುತ್ತದೆ ಅಷ್ಟೆ.
ನನ್ನ ಮಾತೃ ಭಾಷೆ ತಮಿಳು ಮೂಲವಾದ ಸಂಕೇತಿಯಾದುದರಿಂದ, ತಮಿಳು ನನಗೆ ಬರುತ್ತದೆ. ಓದಲಿಕ್ಕೆ ಕಲಿಯಲು ಇನ್ನೂ ಸಾಧ್ಯವಾಗಿಲ್ಲ. ತಮಿಳು ಇಂದು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಅಗ್ರ ಸ್ಥಾನ ಪಡೆದಿದೆಯೆಂದರೆ ಅದಕ್ಕೆ ಕಾರಣ ಅದರ ಪದಗಳ ಶ್ರೀಮಂತಿಕೆ. ತಮಿಳರಿಗೆ ಅದರ ಮೇಲಿರುವ ಪ್ರೀತಿ, ಗೌರವ. ಕನ್ನಡ-ತಮಿಳು ಎರಡಕ್ಕೂ ಸಮನಾದ ಇತಿಹಾಸವಿದ್ದಾರೂ, ಕನ್ನಡ ತನ್ನ ಅದೇ ರೂಪವನ್ನು ಕಾಯ್ದುಕೊಂಡಿಲ್ಲ. ಕನ್ನಡ, ತೆಲುಗು, ಮಲಯಾಳದಲ್ಲಿ ಸಂಸ್ಕೃತದ ಪದಗಳು ಹೇರಳವಾಗಿ ನುಸುಳಿವೆ. ತಮಿಳು ಹಾಗೇ ಕಾಯ್ದುಕೊಂಡಿದೆ ಎಂದು ನಾನು ಹೇಳುವುದಿಲ್ಲ. ಆದರೆ ಕನ್ನಡಕ್ಕಿಂತ ಎಷ್ಟೋಪಾಲು ವಾಸಿ. ಈ ಕನ್ನಡ-ತಮಿಳು ಪದಗಳನ್ನು ನೋಡಿ, ತಿಂಗಳ್ - ಚಂದ್ರ, ಅರಸ್ - ಸರ್ಕಾರ, ಇಳೈ - ಭೂಮಿ, ವಂಡಿ - ಗಾಡಿ... ನೋಡಿ ತಮಿಳಿನ ಎಲ್ಲಾ ಪದಗಳು ಕನ್ನಡದಲ್ಲಿಯೂ ಇವೆ. 'ಬೆಳದಿಂಗಳಿ'ನಲ್ಲಿರುವ ತಿಂಗಳು ಮರೆಯಾಗಿದೆ. 'ಅ-ಅರಸ'ವನ್ನು ಬಿಟ್ಟರೆ ಬೇರೆ ಎಲ್ಲಾ ಕಡೆಗಳಲ್ಲೂ ರಾಜರೇ ರಾರಾಜಿಸುತ್ತಿದ್ದಾರೆ. ಯಾವುದೋ ಕವಿತೆಗಳನ್ನು ಬಿಟ್ಟರೆ, 'ಇಳೆ'ಯನ್ನು ನಾನು ಬೇರೆಲ್ಲಿಯೂ ಕಂಡಿಲ್ಲ. 'ಉಗಿಬಂಡಿ'ಯನ್ನು ಬಿಟ್ಟರೆ ಬಂಡಿ ಎಲ್ಲೋ, ಯಾವಾಗಲೋ ದಾರಿತಪ್ಪಿಯಾಗಿದೆ. ಇನ್ನೂ ಎಷ್ಟೋ ಪದಗಳು ನಮಗೆ ಪರಿಚಯವೇ ಇಲ್ಲ.
ಎಂತಹ ಪರಿಸ್ಥಿತಿ ನೋಡಿ, ಇದ್ದರೂ ಇಲ್ಲದಂತಹದ್ದು.
ನಾನು ಬೇರೆ ಭಾಷೆಯನ್ನು ಕಲಿಯಬೇಡಿಯೆಂದು ಎಂದೂ ಹೇಳುವುದಿಲ್ಲ. ಕನ್ನಡದಲ್ಲಿ ಮರೆಯಾಗುತ್ತಿರುವ ಕನ್ನಡದ್ದೇ ಪದಗಳನ್ನು ಬಳಸಿ ಎಂದಷ್ಟೇ. ಇದೆಲ್ಲಾ ನಮಗ್ಯಾಕೆ ಎನ್ನುವುದಾದರೆ, 'ಕನ್ನಡವನ್ನು ಕನ್ನಡಿಗರಲ್ಲದೇ ಬೇರಾರೂ ಬಳಸುವುದಿಲ್ಲ' ಎಂಬುದೇ ನನ್ನ ಉತ್ತರ.
ಮೇಲಿನ ಬರಹದಲ್ಲಿ, ನಾನು ಕೂಡ ಸಂಸ್ಕೃತದ ಪದಗಳನ್ನು ಬಳಸಿದ್ದರೆ, ಕನ್ನಡದಲ್ಲಿ ಅದಕ್ಕೆ ಪದಗಳಿಲ್ಲದೆಯೋ, ಇಲ್ಲ, ಇದ್ದೂ ನನಗೆ ಗೊತ್ತಿರದೇ ಅಷ್ಟೆ. ಇದ್ದೂ ಬಳಸಿದ್ದರೆ ಸಮನಾದ ಕನ್ನಡ ಪದಗಳನ್ನು ದಯವಿಟ್ಟು ಸೂಚಿಸಿ.

2 Comments:
ee lekhanakke pooraka vaaagiruvanthe kelagina lekhanavide
http://thatskannada.oneindia.in/sahitya/my_karnataka/010807kannada_language_grammar.htmlpa
Nice one...
Post a Comment
Subscribe to Post Comments [Atom]
<< Home