ಮುಂದೆ ಬನ್ನಿ, ಇನ್ನು ಮುಂದೆ ಬನ್ನಿ
Bus Conductor ಕೆಲಸ ವಿಪರೀತ ಕಷ್ಟಕರವಾದದ್ದು. ಬೆಳಗ್ಗಿನ ವಿಪರೀತ ಜನಸಂದಣಿ. Bus ಒಳಗೆ ನೂಕು-ನುಗ್ಗಲು. ಬಸ್ ಬಾಗಿಲುಗಳಿಂದ ಹೊರಕ್ಕೆ ಜೋತಾಡುವ ಜನ. ಪ್ರತಿ Bus Stopನಲ್ಲೂ Ticket ಕೊಡುವ ಕೆಲಸ ಹೊರಗೆಯೇ. ಒಳಗೆ ನಿಲ್ಲಲು ಜಾಗ ಇದ್ದರೆ ತಾನೆ? ಜೊತೆಗೆ Bus Stopನಲ್ಲಿ Busನ ಒಂದು ಬಾಗಿಲಿನಿಂದ ಇನ್ನೊಂದು ಬಾಗಿಲಿನೊಳಕ್ಕೆ ಏರುವ Conductorಗಳ ಸಾಹಸ. ಸಂಜೆಯ ಸಮಯದಲ್ಲೂ ಇದೇ ಸ್ಥಿತಿ. ಆ ಹೊತ್ತುಗಳಲ್ಲಿ ಜನರನ್ನು Busನ ಒಳಕ್ಕೆ ಹತ್ತಿಸುವಷ್ಟರಲ್ಲಿ ಎಲ್ಲಾ Conductorಗಳು ಕೆಂಡಾ-ಮಂಡಲ. ಜನರೂ ಕೂಡ ಎಲ್ಲಿ ಒಳಕ್ಕೆ ಹೋದರೆ ತಾವು ಇಳಿಯಬೇಕಾದ Bus Stopನಲ್ಲಿ ಇಳಿಯಲಾದೀತೋ ಎಂದು ಬಾಗಿಲಲ್ಲೇ ಜೋಕಾಲಿಯಾಡುತ್ತಾರೆ. ಇನ್ನು ಕಾಲೇಜು ಹುಡುಗರಿಗಂತೂ ಅದೇ ಮೋಜು.
ಪ್ರತಿಯೊಂದು Busಗೆ ಒಂದು Character ಅನ್ನು ತಂದು ಕೊಡುವವರೇ ಅದರ Conductor. ಸಾಮಾನ್ಯ, ದಿನವೂ ಅದೇ Busನಲ್ಲಿ ಒಡಾಡುವ ಜನರೊಡನೆ Conductor ಉಭಯ ಕುಶಲೋಪರಿ ಇದ್ದೇ ಇರುತ್ತದೆ. Busನಲ್ಲಿ ಜನ ಕಡಿಮೆ ಇದ್ದರಂತೂ ಜನರೊಡನೆ ಕೂತು ಮಾತು ವಿನಿಮಯ. ಇನ್ನು Busನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಾಗಿದ್ದರೆ, Conductor ಕೂಡ ಒಬ್ಬ ಮೇಷ್ಟ್ರು. ಶಾಲಾ ಮಕ್ಕಳೊಡನೆ ಅವರ ಒಡನಾಟ ಇನ್ನೂ ಹೆಚ್ಚು. ನಾನು ಕಾಲೇಜಿಗೆ ಓಡಾಡುತ್ತಿದ್ದ Busನ Conductorಗೆ ಅದರಲ್ಲಿ ಓಡಾಡುವ ಅಷ್ಟೂ ಜನ ಗೊತ್ತಿರುತ್ತಿದ್ದರು. BE ಮುಗಿದ ಕೆಲವು ತಿಂಗಳ ಮೇಲೆ 43D Busನ Conductor ನಾನು ಅವರ Busನಲ್ಲಿ ಸುಮಾರು ದಿನಗಳಿಂದ ಕಾಣಿಸದೇ ಇದ್ದುದನ್ನು ನೋಡಿ, BE ಮುಗಿಯಿತಾ ಎಂದು ಕೇಳಿದ್ದರು.
ಕೆಲವರನ್ನು ಬಿಟ್ಟರೆ, ಹೆಚ್ಚಿನ Conductorಗಳು ಕೆಲಸ ಎಷ್ಟೇ ಕಷ್ಟವಿದ್ದರೂ ಆ ಕೆಲಸವನ್ನು ಇಷ್ಟಪಟ್ಟು ಮಾಡುತ್ತಾರೆ. Bus ಎಷ್ಟೇ rush ಆಗಿದ್ದರೂ ಕೆಲವೊಮ್ಮೆ ಜನರೋಡನೆ ಅವರಾಡುವ ಸ್ವಾರಸ್ಯಕರ ಮಾತುಗಳು Busನಲ್ಲಿರುವ ಇತರರಿಗೆ ವಿನೋದ. ವಯಸ್ಸಾದವರಿಗೆ Conductorಗಳು ತೋರುವ ಕಾಳಜಿ ಇತರರಿಗೆ ಉದಾಹರಣೆ. ಬರಿ ಪತ್ರಿಕೆ ಹಿಡಿದುಕೊಂಡು ಮದುವೆಗೆ ಹೊರಟಿರುವವರಿಗೆ ಮಂಟಪದ ದಾರಿ ತೋರಿಸುವವರೂ ಅವರೆ.
ಬಹುಶಃ ರಜನೀಕಾಂತ್ಗೆ ತಮ್ಮ ಸಿನಿಮಾಗಳಿಗೆ ಜನರನ್ನು ಸೆಳೆಯುವಲ್ಲಿ, Conductor ಕೆಲಸದಲ್ಲಿ ಬೆಳೆಸಿಕೊಂಡ ಜನರ ಒಡನಾಟ ಸಹಾಯ ಮಾಡಿರಲೇಬೇಕು. ಹೇಗಿದ್ದರೆ, ಹೇಗೆ ಮಾತಾಡಿದರೆ ತಮ್ಮನ್ನು ಜನ ಇಷ್ಟಪಡುತ್ತಾರೆ ಎಂದು ರಜನೀಕಾಂತ್ Conductor ಕೆಲಸದಲ್ಲಿದ್ದಾಗ ಕಲಿತಿರಲೇಬೇಕು.
Bus Conductor ಅನ್ನು ಬಿಟ್ಟರೆ, ಜನರನ್ನು ಹತ್ತಿರದಿಂದ ನೋಡುವ, ಅವರೊಂದಿಗೆ ವಿಶೇಷವಾದ ಸಂಬಂಧ ಬೆಸೆಯುವ ಇನ್ನೊಂದು ವೃತ್ತಿ ಇಲ್ಲ ಅಲ್ಲವೇ?